ಎಲ್. ನಾರಾಯಣ ರೆಡ್ಡಿಯವರು ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವಂತಹ ಪ್ರಗತಿಪರ ರೈತ ಮತ್ತು ಕೃಷಿತಜ್ಞರಾಗಿದ್ದರು. ಇವರು ಕೃಷಿರಂಗದಲ್ಲಿ ಮಾರ್ಗದರ್ಶಕರಾಗಿದ್ದರು.ದೊಡ್ಡಬಳ್ಳಾಪುರ ಸಮೀಪದ ಸೋರಹುಣಸೆ ಗ್ರಾಮದಲ್ಲಿ ನೆಲೆಸಿದ್ದ ಇವರು ಸಾವಯವ ಕೃಷಿಯ ಸಾಧನೆಗಾಗಿ 'ನಾಡೋಜ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. == ಜೀವನ == ಸೋರಹುಣಸೆ ಗ್ರಾಮದ ನಾರಾಯಣ ರೆಡ್ಡಿಯವರು ಹುಟ್ಟಿದ್ದು ೧೮ ಸೆಪ್ಟೆಂಬರ್ ೧೯೩೫. ತಂದೆ ಲಕ್ಷ್ಮಯ್ಯ ರೆಡ್ಡಿ, ತಾಯಿ ಎಲ್ಲಮ್ಮ. ಹೆಂಡತಿ ಸರೋಜಮ್ಮ. ಮಕ್ಕಳು ಮಂಜುನಾಥ, ನಿತ್ಯಾನಂದ ಮತ್ತು ಸಾಯಿನಾಥ. ರೆಡ್ಡಿಯವರು ಎಸ್.ಎಸ್.ಎಲ್.ಸಿ. ವರೆಗಿನ ವಿದ್ಯಾಭ್ಯಾಸ ಮಾಡಿದ್ದಾರೆ. == ಪ್ರಶಸ್ತಿ, ಗೌರವಗಳು == ಹಂಪಿ ವಿಶ್ವವಿದ್ಯಾನಿಲಯದ 'ನಾಡೋಜ ಪ್ರಶಸ್ತಿ' (೨೦೦೪) ರಾಜ್ಯೋತ್ಸವ ಪ್ರಶಸ್ತಿ (೧೯೯೪) ತಾಲ್ಲೂಕು, ಜಿಲ್ಲಾ, ರಾಜ್ಯ ಕೃಷಿ ಸಾಧಕ ಪ್ರಶಸ್ತಿ (೧೯೭೭, ೭೮, ೭೯) ಎಚ್. ಡಿ. ಚೌಡಯ್ಯ ಪ್ರತಿಷ್ಠಾನ ಪ್ರಶಸ್ತಿ (೨೦೦೪) ಡಾ|| ಆರ್. ದ್ವಾರಕಾನಾಥ್ ಶ್ರೇಷ್ಠ ಕೃಷಿಕ ಪ್ರಶಸ್ತಿ (೨೦೧೧) == ನಿರ್ವಹಿಸಿದ ಸ್ಥಾನಗಳು == ೧೧ನೇ ಪಂಚವಾರ್ಷಿಕ ಯೋಜನೆಯ ಸಲಹಾ ಸಮಿತಿಯ ಸದಸ್ಯರು 'ಸಾವಯವ ಕೃಷಿ ಮಿಷನ್' ಸದಸ್ಯರು ಸಾವಯವ ಕೃಷಿ ಸಲಹಾ ಸಮಿತಿ ಸದಸ್ಯರು ಕರ್ನಾಟಕ ರಾಜ್ಯ ಪರಿಸರ ಸಂರಕ್ಷಣಾ ಸಮಿತಿ ಸದಸ್ಯ ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹಾಲೋಚನ ಕೇಂದ್ರದ ಸದಸ್ಯರು ಹುಲಿಕೋಟೆ ಎಚ್.ಕೆ.ಪಾಟೀಲ್ ಪ್ರತಿಷ್ಠಾನ ಮತ್ತು ಕೊಡೈಕೆನಾಲ್ ಕೋಲೆ ಶಾಲೆಯ ಗೌರವಾನ್ವಿತ ಟ್ರಸ್ಟಿ == ನಿಧನ == ನಾರಾಯಣ ರೆಡ್ಡಿಯವರು ೧೪ಜನವರಿ೨೦೧೯ರಂದು ನಿಧನರಾದರು. ಅವರಿಗೆ ೮೩ ವರ್ಷ ವಯಸ್ಸಾಗಿತ್ತು. == ಉಲ್ಲೇಖಗಳು/ಆಕರಗಳು == == ಹೊರಸಂಪರ್ಕ ಕೊಂಡಿಗಳು == , - - 7, 2013 | - 2016-11-18 ವೇಬ್ಯಾಕ್ ಮೆಷಿನ್ ನಲ್ಲಿ. “ಒಂದ್ ಕೋಟಿ ರೂಪಾಯಿ ಕೊಟ್ರೂ ಒಂದೆಕ್ರೆ ಜಮೀನು ಸಿಗಲ್ಲ” –ಎಲ್.ನಾರಾಯಣ ರೆಡ್ಡಿ == ಹೆಚ್ಚಿನ ಓದು == ಪು: ಈ ಭೂಮಿ ಈ ಸಸ್ಯ - ಡಾ. ನಾರಾಯಣ ರೆಡ್ಡಿಯವರ ಕೃಷಿ ವಿಚಾರಗಳು, ನಿರೂಪಣೆ: ಬಂದಗದ್ದೆ ರಾಧಾಕೃಷ್ಣ, ನವಕರ್ನಾಟಕ ಪ್ರಕಾಶನ